Wednesday, March 23, 2011
Wednesday, March 2, 2011
ಮರೆತಾಗಿದೆ
ಮರೆತಾಗಿದೆ ನಾನಾಗಲೇ ನಿನ್ನನು ಮತ್ತೆ ಮತ್ತೆ ನೆನಪಾಗದಿರು. ಕಟ್ಟಿದ್ದ ಕನಸಿನ ಗೋಪುರ ಭಗ್ನವಾಗಿದೆ ಅವಶೇಷಗಳ ಉಳಿಸದೆ. ಮನಸಲಿ ಮೂಡಿದ್ದ ನೆನಪಿನ ರಂಗೋಲಿ ಅಳಿಸಿ ಹೋಗಿದೆ ಚುಕ್ಕಿಗಳ ಉಳಿಸದೆ. ಕಣ್ಣಂಚಿನ ನೀರಲ್ಲಿ ಕರಗಿವೆ ಆಸೆಗಳು ನಿನ್ನಿಂದ ನಾ ಈಗ ಬಲು ದೂರ. ನೆನಪಾಗದಿರು ಮತ್ತೆಂದೂ ನನ್ನ ಹೃದಯದಲಿ ಈಗ ನೀನಿಲ್ಲ. ನಾ ನಿನ್ನ ಮರೆಯಲು ಕಾರಣ ನೀನೇ ಎಲ್ಲಾ.. ತೀರ ಸೇರದೆ ನಾನೀಗ ನಿನ್ನಿಂದ ಬಲು ದೂರ. * ರಶ್ಮಿ ಆಳ್ವ * |
Monday, January 31, 2011
ಹೃದಯದ ಬಂಧಿ
ಹೃದಯದ ಬಂಧಿ ನನ್ನ ಒಲವಿನ ಭಾವನೆಗಳನ್ನು ಸುಮಗಳ ಹಾರವನ್ನಾಗಿ ಮಾಡಿ ಕಣ್ಣ ಕಾಂತಿಯಲ್ಲೇ ಆರತಿಯ ಬೆಳಗಿಸಿ ನನ್ನುಸಿರಿನಲ್ಲಿ ನಿನ್ನ ಹೆಸರ ಬರೆದೆನು.. ನನ್ನೀ ಹೃದಯದ ಬಾಗಿಲನ್ನು ತೆರೆದು ಸ್ವಾಗತವ ಬಯಸಿದ್ದೆ ಮನದುಂಬಿ ಕಾದಿದ್ದೆ ತಡವಾಗಿ ತಿಳಿಯಿತು ನನಗೆ ನೀನಾಗಲೇ ಮತ್ತೊಂದು ಹೃದಯದೊಳಗೆ ಬಂಧಿಯೆಂದು. ನಿನ್ನ ನೆನಪಲಿ ಮಿಡಿಯುವ ಹೃದಯ |
Subscribe to:
Posts (Atom)