Wednesday, March 2, 2011

ಮರೆತಾಗಿದೆ







ಮರೆತಾಗಿದೆ ನಾನಾಗಲೇ ನಿನ್ನನು
ಮತ್ತೆ ಮತ್ತೆ ನೆನಪಾಗದಿರು.
ಕಟ್ಟಿದ್ದ ಕನಸಿನ ಗೋಪುರ ಭಗ್ನವಾಗಿದೆ
ಅವಶೇಷಗಳ ಉಳಿಸದೆ.
ಮನಸಲಿ ಮೂಡಿದ್ದ ನೆನಪಿನ ರಂಗೋಲಿ
ಅಳಿಸಿ ಹೋಗಿದೆ ಚುಕ್ಕಿಗಳ ಉಳಿಸದೆ.
ಕಣ್ಣಂಚಿನ ನೀರಲ್ಲಿ ಕರಗಿವೆ ಆಸೆಗಳು
ನಿನ್ನಿಂದ ನಾ ಈಗ ಬಲು ದೂರ.
ನೆನಪಾಗದಿರು ಮತ್ತೆಂದೂ
ನನ್ನ ಹೃದಯದಲಿ ಈಗ ನೀನಿಲ್ಲ.
ನಾ ನಿನ್ನ ಮರೆಯಲು ಕಾರಣ ನೀನೇ ಎಲ್ಲಾ..
ತೀರ ಸೇರದೆ ನಾನೀಗ ನಿನ್ನಿಂದ ಬಲು ದೂರ.



* ರಶ್ಮಿ ಆಳ್ವ *